ನಂದ, ಮೌರ್ಯ, ಶಾತವಾಹನರ ಆಡಳಿತಕ್ಕೆ ಈ ಪ್ರದೇಶ ಒಳಪಟ್ಟಿತ್ತಾದರೂ ಅವರ ಕಾಲದ ಯಾವುದೇ ಕುರುಹುಗಳು ಈ ಭಾಗದಲ್ಲಿ ಉಳಿದಿಲ್ಲ. ಬದಾಮಿಯ ಚಾಲುಕ್ಯರು, ರಾಷ್ಟ್ರಕೂಟರು ಹಾಗೂ ಕಲ್ಯಾಣಿ ಚಾಲುಕ್ಯರೂ ಇಲ್ಲಿ ಆಳಿದ್ದರು. ಕಲ್ಯಾಣದ ಅರಸರ ಹಲವು ಶಾಸನಗಳು ಇಲ್ಲಿನ ಪರಿಸರದಲ್ಲಿ ಕಾಣಬರುತ್ತದೆ. ಬಸವನಬಾಗೇವಾಡಿ, ಸಂಗಮ ಮಧ್ಯವರ್ತಿ ಸ್ಥಳವಾದ್ದರಿಂದ ಬಸವಾದಿ ಶರಣರು ಪ್ರಭಾವ ಈ ಭಾಗದ ಜನಜೀವನದ ಮೇಲೆ ಅಚ್ಚೋತ್ತಿದಂತಾಗಿದೆ. ನಂತರ ಮುಸಾಲ್ಮಾನ ಅರಸರ ಆಡಳಿತಕ್ಕೆ ಒಳಪಟ್ಟಿದ್ದರಿಂದ ಅವರ ಪ್ರಭಾವವೂ ಆಗಿದೆ. ಕೃಷ್ಣಾನದಿಯು ಅಡ್ಡ ಬರುತ್ತಿರುವುದರಿಂದ ಮತ್ತು ಆದಿಲಶಾಹಿಗಳು ಪ್ರಬಲರಾಗಿದ್ದುದರಿಂದ ವಿಜಯನಗರ ಅರಸರ ಬಾದಾಮಿಯವರೆಗೆ ದಾಳಿ ಮಾಡಿದ ಟಿಪ್ಪುಸುಲ್ತಾನ ಮೊದಲಾದ ದಾಕ್ಷಿಣಾತ್ಯ ಅರಸರ ಪ್ರಭಾವವು ಈ ಭಾಗದ ಜನಜೀವನದ ಮೇಲೆ ಹೆಚ್ಚಾಗಿ ಅದಂತಿಲ್ಲ. ಕಲ್ಯಾಣ ಚಾಲುಕ್ಯರ ಮತ್ತು ಆದಿಲಶಾಹಿ ಅರಸರಿಗೆ ಸಂಬಂಧಿಸಿದ ಕೆಲವೊಂದು ಶಾಸನಗಳು ಈ ಭಾಗದಲ್ಲಿ ಲಭ್ಯವಾಗಿವೆ. ಈ ತಾಲೂಕಿನ ಬಹುತೇಕ ಶಾಸನಗಳು ದಾನದತ್ತಿ ಹಾಗೂ ವೀರ ಮರಣಗಳಿಗೆ ಸಂಬಂಧಿಸಿರುವಂಥವು. ಅಂದಿನ ಯುಗಧರ್ಮಕ್ಕೆ ಈ ಭಾಗವೂ ಸ್ಪಂಧಿಸಿತ್ತೆಂಬುದಕ್ಕೆ ಇವು ಸಾಕ್ಷಿಯಾಗಿವೆ. ಆದರೆ ಜನಜೀವನದ ಉಳಿದ ವಿಷಯಗಳ ಮೇಲೆ ಶಾಸನಗಳು ಬೆಳಕು ಚೆಲ್ಲುವುದಿಲ್ಲ. ಜನರ ಅಜ್ಞಾನದಿಂದಾಗಿಯೂ ಚರಿತ್ರೆಯ ಮೇಲೆ ಬೆಳಕು ಚೆಲ್ಲಬಹುದಾಗಿದ್ದ ಎಷ್ಟೋ ಶಾಸನಗಳು ಹಾಳಾಗಿವೆ. ಉದಾಹರಣೆಗೆ ಪಡೆಕನೂರನಲ್ಲಿಯೂ ಹನುಮಂತ ದೇವರ ಗುಡಿಯ ನಂದಿ ಕಂಬದ ಮೇಲೋಂದು ಕೊಲ್ಲಾಪೂರದ ಸಿದ್ದರಾಮನ ಶಾಸನವನ್ನು ಕೆತ್ತಲಾಗಿತ್ತು. ನಂದಿ ಕಂಬವು ಒಡೆದು ಇಬ್ಬಾಗವಾದಾಗ ಶಾಸನದ ಮಹತ್ವವರಿಯದ ಜನ ಅದನ್ನು ರಕ್ಷಿಸುವದರ ಬದಲು ದೇವಾಲಯದ ಜೀರ್ಣೋದ್ದಾರ ಕಾಲಕ್ಕೆ ಮೆಟ್ಟುಗಟ್ಟಿಗೆ ಬಳಸಿದ್ದುದು ಕಂಡುಬರುತ್ತದೆ. ಮುದ್ದೇಬಿಹಾಳವನ್ನೋಳಗೋಂಡ ವಿಜಯಪೂರ ಪ್ರಾಂತವು 1347 ರಲ್ಲಿ ಅಲ್ಲಾವುದ್ದಿನ್ ಹಸನ ಗಂಗೂ ಬಹಮನಿ ಇವನಿಂದ ಸ್ಥಾಪಿತವಾದ ಬಹಮನಿ ರಾಜ್ಯದ ಒಂದು ಭಾಗವಾಗಿತ್ತು. ಹದಿನೈದನೆಯ ಶತಮಾನದ ಕೊನೆಯ ದಶಕಗಳಲ್ಲಿ ಬಹುಮನಿ ರಾಜ್ಯವು ಬಲಹೀನವಾಯಿತು ಮತ್ತು ತುಂಡುತುಂಡಾಯಿತು. ಬಹುಮನಿ ರಾಜ್ಯದ ಪ್ರಾಂತವೊಂದರ ಗವರ್ನರರಾಗಿದ್ದ ಯುಸುಫ್ ಅಲಿಯು ಇದರ ಲಾಭ ಪಡೆದು ತಾನು ಸ್ವತಂತ್ರನೆಂದು ಸಾರಿದನು. 1489 ರಲ್ಲಿ ವಿಜಯಪೂರ ಆದಿಲಶಾಹಿ ಅರಸರ ಅಳ್ವಿಕೆಯಲ್ಲಿ ಪ್ರತ್ಯೇಕ ರಾಜ್ಯವಾಯಿತು. 1686ರಲ್ಲಿ ವಿಜಯಪೂರ ಮೊಗಲ ದೊರೆ ಔರಂಗಜೇಬನ ಕೈವಶವಾಯಿತು. 1723 ರವರೆಗೆ ಮೊಗಲ ಕೈಕೆಳಗಿನ ನಿಜಾಮನ ರಾಜ್ಯದ ಒಂದು ಭಾಗವಾಯಿತು. 1760 ರಲ್ಲಿ ನಿಜಾಮನು ವಿಜಯಪೂರದ ಮೇಲಿನ ತನ್ನ ಹಕ್ಕನ್ನು ಬಾಲಾಜಿ ಪೇಶ್ವೆಗೆ ಕೊಟ್ಟನು. ಬಾಲಾಜಿ ಪೇಶ್ವೆ ತನ್ನ ಗವರ್ನರನ್ನು ನೇಮಿಸಿದನು. ಪೇಶ್ವೆಯವರ ಆಳ್ವಿಕೆಯಲ್ಲಿ ತೆರೆಗೆ ಎತ್ತುವುದನ್ನು ಗುತ್ತಿಗೆಯಿಂದ ಕೊಡಲಾಗುತ್ತಿತ್ತು. ಗುತ್ತಿಗೆದಾರರು ಕ್ರೂರರಾಗಿದ್ದರು. ಮುದ್ದೇಬಿಹಾಳವನ್ನೋಳಗೋಂಡ ವಿಜಾಪೂರ ಪ್ರಾಂತದ ಅನೇಕ ಭಾಗಗಳ ಸ್ಥಿತಿಗತಿಗಳು ಚಿಂತಾಜನಕವಾಗಿದ್ದವು. ಕೆಲವೊಂದು ಊರುಗಳಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಬಾಜೀರಾವ್ ಪೇಶ್ವೆ ಬಳಕೆಯಲ್ಲಿ ತಂದಿದ ಅನಿಷ್ಟಕಾರಕ ಒಕ್ಕಲುತನ ಪದ್ದತಿಯು ಜನರನ್ನು ಮತ್ತಿಷ್ಟು ಬಡವಾಗಿಸಿದ್ದಿತು. ದರೋಡೆಕಾರರು ಭಯ ಭೀತಿ ಇಲ್ಲದೆ ಸುಲಿಗೆ ಮಾಡುತ್ತಿದ್ದರು. ಪೋಲಿಸರು ಜನರನ್ನು ರಕ್ಷಿಸುವುದರ ಬದಲು ಸುಲಿಗೆಯಲ್ಲಿ ಪಾಲುದಾರರಾಗಿದ್ದರು. ಒಟ್ಟಿನಲ್ಲಿ ಪೇಶ್ವೆಯವರ ಕಾಲಕ್ಕೆ ಜನಜೀವನದಲ್ಲಿ ಸುಖ ಶಾಂತಿಗಳು ನೆಲೆಸಿರಲಿಲ್ಲ. 1818ರಲ್ಲಿ ಪೇಶ್ವೆಯವರ ಪತನವಾಯಿತು. ವಿಜಯಪೂರ ಬ್ರಟಿಷರ ಅಧೀನಕ್ಕೆ ಒಳಪಟ್ಟಿತು. 1820ರಲ್ಲಿ ಇಂಡಿ, ಮುದ್ದೇಬಿಹಾಳ ತಾಲೂಕುಗಳ 345 ಗ್ರಾಮಗಳನ್ನು ಬಾಗಲಕೋಟೆ ಸಬ್ ಕಲೆಕ್ಟೋರೇಟಗೆ ಒಳಪಡಿಸಿ ಧಾರವಾಡ ಜಿಲ್ಲೆಗೆ ಸೇರಿಸಲಾಯಿತು. 1825ರಲ್ಲಿ ಈ ತಾಲೂಕುಗಳನ್ನು ಪುಣೆ ಜಿಲ್ಲೆಗೆ ವರ್ಗಾಯಿಸಲಾಯಿತು. 1830ರಲ್ಲಿ ಮತ್ತೇ ಧಾರವಾಡ ಜಿಲ್ಲೆಗೆ ಸೇರಿಸಲಾಯಿತು. ಮುಂದೆ ಹೊಸದಾಗಿ ಸೊಲ್ಲಾಪುರ ಜಿಲ್ಲೆಯ ರಚನೆಯಾದಾಗ, ಈ ತಾಲೂಕುಗಳು ಹೊಸ ಜಿಲ್ಲೆಯಲ್ಲಿ ಸೇರ್ಪಡೆಯಾದವು. 1864ರಲ್ಲಿ ಕಲಾದಗಿ ಜಿಲ್ಲೆಯನ್ನು ರಚಿಸಿದಾಗ, ಆ ಜಿಲ್ಲೆಗೆ ಈ ತಾಲೂಕುಗಳು ವರ್ಗಾಯಿಸಲ್ಪಟ್ಟವು. 1884 ರಲ್ಲಿ ವಿಜಯಪೂರ ಜಿಲ್ಲೆಯ ಕೇಂದ್ರವಾಯಿತು. ಅಂದಿನಿಂದ ಇಂದಿನವರೆಗೆ ಮುದ್ದೇಬಿಹಾಳವು ವಿಜಯಪೂರ ಜಿಲ್ಲೆಯ ಒಂದು ತಾಲೂಕಾಗಿದೆ. ( ಆಯ್. ಬಿ. ಎಚ್. ಪ್ರಕಾಶನದಿಂದ ಪ್ರಕಟನೆಗೆ ಸ್ವೀಕೃತವಾದ ಇದೇ ಲೇಖಕರ ‘ ಮುದ್ದೇಬಿಹಾಳ ತಾಲೂಕು ದರ್ಶನ ‘ಎಂಬ ಕೃತಿಯ ಭಾಗ. ಪ್ರಕಾಶಕರ ಸೌಜನ್ಯದೊಂದಿಗೆ )
ಮುದ್ದೇಬಿಹಾಳ ತಾಲೂಕಿನ ಭೂ ಪ್ರದೇಶವು ಭೌಗೋಳಿಕವಾಗಿ ದಕ್ಷಿಣದ ಪ್ರಸ್ಥಭೂಮಿಯ ಭಾಗವಾಗಿದ್ದರಿಂದ ಇದು ಆರೋಗ್ಯಕರವಾದ ಒಣ ಹವೆಯನ್ನು ಹೋದಿದೆ. ಖಸೆಂಬರ್ ನಿಂದ ಮೇ ತಿಂಗಳವರೆಗೂ ಅತ್ತಯಂತ ಶುಷ್ಕ ವಾತಾವರಣವಿರುತ್ತದ್ದೆ. ಏಪ್ರಿಲ್ ತಿಂಗಳಿಂದಲೇ ಆಕಾಶದಲ್ಲಿ ಮುಂಗಾರು ಮಳೆಗಾಲವಿರುತ್ತದೆ. ಸೆಪ್ಟೆಂಬರ್ ತಿಂಗಳಿಂದ ನವೆಂಬರ ತಿಂಗಳವರೆಗೆ ಹಿಂಗಾರು ಮಳೆಗಾಲ. ತಾಲೂಕಿನ ವಾರ್ಷಿಕ ಸರಾಸರಿ ಮಳೆಯ 535.5 ಮೀ. ಮೀ. ಇದು 38.1 ದಿನಗಳಲ್ಲಿ ಹಂಚಲ್ಪಡುತ್ತದೆ. ಮಳೆ ಇಲ್ಲಿ ಕಡಿಮೆ. ಎರಡು ವೃಷ್ಟಿಮಾಪಕ ಕೇಂದ್ರಗಳಿದ್ದು ಮಳೆ ಪರಿಮಾಣವನ್ನು ಅಳೆಯಲು ಒದಗಿವೆ. ಡಿಸೆಂಬರನಿಂದ ಫೆಬ್ರವರಿಯವರೆಗೆ ಚಳಿಗಾಲವಿದ್ದು ಮಾರ್ಚಿನಿಂದ ಮೇ ತಿಂಗಳವರೆಗೆ ಬೇಸಿಗೆ ಕಾಲ ಇರುತ್ತದೆ. ಡಿಸೆಂಬರ್ ಅತಿ ತಂಪು ಇರುತ್ತದೆ. ಅತಿ ಕಡಿಮೆ ಉಷ್ಣತಾಮಾನ ಎಂದರೆ 14.8 ಡಿಗ್ರಿ ಸೆಂಟಿಗ್ರೇಡ್, ಮೇ ತಿಂಗಳಲ್ಲಿ ಅತಿ ಹೆಚ್ಚಿನ ಉಷ್ಣತಾಮಾನ 38.6 ಡಿಗ್ರಿ ಸೆಂಟಗ್ರೇಡ್, ಜೂನ ತಿಂಗಳ ಪ್ರಾರಂಭದಲ್ಲಿ ಮಾನ್ಸೂನ್ ಮಳೆ ಆರಂಭವಾಗಿ ಹವೆ ತಂಪಾಗುತ್ತದೆ.
ಕೃಷ್ಣಾ ಹಾಗೂ ಡೋಣಿ ಈ ತಾಲೂಕಿನಲ್ಲಿ ಹರಿಯುವ ನದಿಗಳಾಗಿವೆ. ಕೃಷ್ಣಾ ನದಿಯು ಮಹಾರಾಷ್ಟ್ರ ರಾಜ್ಯದ ಮಹಾಬಳೆಶ್ವರದಲ್ಲಿ ಹುಟ್ಟಿ, ಮಹಾರಾಷ್ಟ್ರ ಗಡಿ ದಾಟಿ ಬೆಳಗಾವಿಯ ಜಿಲ್ಲೆಯನ್ನು ಪ್ರವೇಶಿಸುತ್ತದೆ, ನಂತರ ಹರಿಯಯತ್ತಾ ಬಂದು ಬಾಗಲಕೋಟೆ ತಾಲೂಕಿನಲ್ಲಿ ಚಿಕ್ಕ ಸಂಗಮದಲ್ಲಿ ಘಟಪ್ರಭೆಯನ್ನು ತನ್ನ ಒಡಲಲ್ಲಿ ಸೇರಿಸಿಕೊಂಡು ಹಾಗೆಯೇ ಮುಂದುವರಿದು ಹುನಗುಂದ ತಾಲೂಕಿನ ಕೂಡಲಸಂಗಮನಾಥನ ಸಾನ್ನಿಧ್ಯದಲ್ಲಿ ಮಲಪ್ರಭೆಯನ್ನು ಅಪ್ಪಿಕೋಂಡಿದೆ. ಮುಂದೆ ಮುದ್ದೇಬಿಹಾಳ ತಾಲೂಕಿನ ನೈರುತ್ಯದ ಗಡಿಯನ್ನು ಸೇರಿ, ಹಾಗೆಯೆ ದಕ್ಷಿಣ ದಂಡೆಗುಂಟ ಸಾಗಿ ರಾಯಚೂರು ಜಿಲ್ಲೆಯ ಲಿಂಗಸುಗೂರ ತಾಲೂಕನ್ನು ಪ್ರವೇಶಿಸಿದೆ. ಕೃಷ್ಣೆಯ ಕಂಡೆಗುಂಟ ಎರೆ ಮಣ್ಣಿನ ಫಲವತ್ತಾದ ಭೂಮಿಯಿದೆ. ತಾಲೂಕಿನ ಪಶ್ಚಿಮದ ಗಡಿಯಾಗಿ ಹರಿಯುವ ಹಿರೇಹಳ್ಳಿ ನೈರುತ್ಯಾಭೀಮುಖವಾಗಿ ಕೃಷ್ಣಾ ನದಿಯನ್ನು ಸೇರುತ್ತದೆ. ಮಹಾರಾಷ್ಟ್ರದಿಂದ ಹರಿದುಬಂದಿರುವ ಡೋಣಿ ನದಿಯು ವಿಜಯಪೂರ ಹಾಗೂ ಬಸವನ ಬಾಗೇವಾಡಿ ತಾಲೂಕುಗಳನ್ನು ದಾಟಿ ಮುದ್ದೇಬಿಹಾಳ ತಾಲೂಕಿನ ಉತ್ತರದ ಗಡಿಯನ್ನು ಪ್ರವೇಶಿಸಿ, ತಾಳಿಕೋಟೆ ಭಾಗದಲ್ಲಿ ಹರಿದಿದೆ. ಆಮೆಲೆ ಪೂರ್ವಕ್ಕೆ ಹರಿದು ಕೃಷ್ಣೆಯನ್ನು ಸೇರುತ್ತದೆ. ‘ಢೋಣಿ ಬೆಳೆದರೆ ಓಣಿಲ್ಲ ಜೋಳ’ ಎಂಬುದು ಈ ಭಾಗದಲ್ಲೆಲ್ಲಾ ಪ್ರಚಲಿತವಿರುವ ಗಾದೆ ಮಾತು, ಡೋಣಿಯಿಂದಾಗಿ ಭೂಮಿ ಫಲವತ್ತಾಗಿದೆ ಎನ್ನುವುದಕ್ಕಿಂತ ಫಲವತ್ತಾದ ಭೂಪ್ರದೇಶದಲ್ಲಿಯೇ ಅದು ಹರಿದಿದೆ ಎಂಬುದು ಹೆಚ್ಚು ಸೂಕ್ತವೆಂದು ಕಾಣುತ್ತದೆ ಡೋಣಿಯಿಂದುಂಠಾಗುವ ಲಾಭಕ್ಕಿಂತಲೂ ಹಾನಿಯೇ ಅಧಿಕ. ಡೋಣಿ ನೀರು ಮಳೆಗಾಲದಲ್ಲಿ ಮಾತ್ರ ಸಿಹಿ. ಆಗ ತಂದು ಬಿಟ್ಟು ರೇವೆಯಿಂದ ನದಿ ಪ್ರದೇಶದ ಫಲವತ್ತತೆ ಸ್ವಲ್ಪ ಹೆಚ್ಚಬಹುದು. ಆದರೆ ಉಳಿದ ಅವಧಿಯಲ್ಲಿ ಇದರ ನೀರು ಉಪ್ಪು ಹೀಗಾಗಿ ನೀರಾವರಿಗೆ ಮತ್ತು ಕುಡಿಯಲು ಅನರ್ಹವಾಗಿರುತ್ತದೆ. ಇದರಿಂದಾಗಿ ನದಿ ದಂಡೆಯ ಪ್ರದೇಶವು ಸವುಳಾಗಿ ಪರಿಣಮಿಸುತ್ತದೆ. ಒಕ್ಕಲುತನ ಅಭಿವೃದ್ದಿಗೆ ಆತಂಕ ಉಂಟಾಗುತ್ತಿದೆ. ವೈಜ್ಞಾನಿಕ ಕೃಷಿಗೆ ಸವಾಲನ್ನೆಸೆಯುತ್ತಿದೆ. ಲ್ಲದೆ ನದಿ ದಂಡೆಯ ಕೆಲವೆಡೆಗಳಲ್ಲಿ 30 ನದಿ ಆಳದವರೆಗೂ ಹುಸಿ ಮಣ್ಣು ಶೇಖರವಾಗಿ ವಿಶೇಷವಾಗಿ ಮಳೆಗಾಲದಲ್ಲಿ ಜನರು ಮತ್ತು ದನಕರುಗಳ ಪ್ರಾಣಕ್ಕೆ ಕುತ್ತಾಗಿ ಪರಿಣಮಿಸುತ್ತದೆ. ಈ ತಾಲೂಕಿನಲ್ಲಿ ಇವಲ್ಲದೆ ಕೆಲವು ಸಣ್ಣ ಹಳ್ಳಿಗಳೂ, ಕೆರೆಗಳೂ, ಬಾವಿಗಳೂ ಇವೆ.
ಮುದ್ದೇಬಿಹಾಳ ತಾಲೂಕಿನಲ್ಲಿ ದೋಡ್ಡ ಗುಡ್ಡ ಬೆಟ್ಟಗಳಿಲ್ಲ. ನಾಗರಬೆಟ್ಟ, ಸರೂರ ಗುಡ್ಡ, ತೂಗೂಡ್ಡ, ಇಣಚಗಲ್ಲು ಗುಡ್ಡ, ಶಿರೋಳಗುಡ್ಡ ಮೊದಲಾದವು ಸಣ್ಣ ಗುಡ್ಡಗಳು. ಗರಸಿನ ಮತ್ತು ಕಲ್ಲಿನ ಸ್ತರವುಳ್ಳವು. ಮುದ್ದೇಬಿಹಾಳದ ಹತ್ತಿರ ಸಣ್ಣ ದೊಡ್ಡ ದುಂಡನೆಯ ಕಲ್ಲುಗಳು ದನ್ನೆಗಳ ಮೇಲೆ ಗೋಚರಿಸುತ್ತಿವೆ. ಅಲ್ಲಲ್ಲಿ ಕಾರಿ, ಬಾರಿ, ಇಂಗಳ, ಗುಲಗಂಜಿ, ಬನ್ನಿ, ಜಾಲಿ ಮುಂತಾದ ಕಂಟಿಗಳು ಮಾತ್ರ ಬೆಳೆದಿರುತ್ತವೆ. ಇಡೀ ವಿಜಯಪೂರ ಜಿಲ್ಲೆಯಲ್ಲಿಯೇ ಅರಣ್ಯ ಕ್ಷೇತ್ರದ ಪ್ರಮಾಣ ಕೇವಲ ನೂರಕ್ಕೆ 5ರಷ್ಟು. ಅಂದರೆ ಕೇವಲ ಎರಡು ಲಕ್ಷ ಎಕರೆಗಳಿಗಿಂತ ಸ್ವಲ್ಪ ಹೆಚ್ಚು. ಇದರ ತೋಂಭತ್ತಾರರಷ್ಟು ಅಡವಿ ಬಾಗಲಕೋಟೆ, ಬಾದಾಮಿ, ಹುನಗುಂದ, ಮುಧೋಳ, ಜಮಖಂಡಿ ಮತ್ತು ಭೀಳಗಿ ತಾಲೂಕುಗಳಲ್ಲಿ ಹಂಚಿಹೋಗಿವೆ. ಬಾಗೇವಾಡಿ ಮತ್ತು ವಿಜಯಪೂರ ತಾಲೂಕುಗಳಲ್ಲಿ ಅಡವಿ ಕ್ಷೇತ್ರ 3000 ಎಕರೆಗಳಿಗಿಂತಲೂ ಕಡಿಮೆ. ಇಚಿಡಿ ಸಿಂದಗಿ ಮತ್ತು ಮುದ್ದೇಬಿಹಾಳ ತಾಲೂಕುಗಳಲ್ಲಿ ಅಡವಿ ಇಲ್ಲ.
ಈ ತಾಲೂಕಿನಲ್ಲಿ ಹಿಂದೂ, ಮುಸಲ್ಮಾನ ಮತ್ತು ಜೈನ ಧರ್ಮಿಯರಿದ್ದಾರೆ. ಹೊಲೆಯ, ಮಾದಿಗ, ಭಜಂತ್ರಿ, ಸುಡುಗಾಡಸಿದ್ದ, ಕುರುಬ, ಬೇಡ, ತಳವಾರ, ನಾಯಕ ಮೊದಲಾದ ಜಾತಿಗಳ ಜನರು ಇದ್ದರೆ. ಇತ್ತೀಚಿನ ವರ್ಷಗಳಲ್ಲಿ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಲಂಬಾಣಿಗಳು ಈ ತಾಲೂಕಿನಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಹಲವಾರು ಊರುಗಳ ಸಮೀಪದಲ್ಲಿಯೇ ಪ್ರÀತ್ಯೇಕವಾಗಿಯೇ ತಾಂಡಾಗಳಲ್ಲಿ ನೆಲೆಸಿರುತ್ತಾರೆ.